Home / ಕ್ರೈಂ / ಪಟಾಕಿ ಕಿಡಿಗೆ 5 ಬೈಕ್‌ಗಳು ಭಸ್ಮ! ಹುಬ್ಬಳ್ಳಿಯ...

ಪಟಾಕಿ ಕಿಡಿಗೆ 5 ಬೈಕ್‌ಗಳು ಭಸ್ಮ! ಹುಬ್ಬಳ್ಳಿಯಲ್ಲಿ ತಪ್ಪಿದ ದೊಡ್ಡ ದುರಂತ

E
By ETV 24X7 Chief Admin
November 11, 2026 395 views 0 comments Edit Article
ಪಟಾಕಿ ಕಿಡಿಗೆ 5 ಬೈಕ್‌ಗಳು ಭಸ್ಮ! ಹುಬ್ಬಳ್ಳಿಯಲ್ಲಿ ತಪ್ಪಿದ ದೊಡ್ಡ ದುರಂತ

ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಕಿಡಿಗೆ ಐದು ಬೈಕ್‌ಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ ಎನ್ನಲಾಗುತ್ತಿದೆ. ನಗರದ ಕೇಶ್ವಾಪುರದ ದಯಾನಂದ ಕಾಲೋನಿಯ ಕೆ.ಎ. ಆದೋನಿ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಪಟಾಕಿ ಕಿಡಿಗೆ 5 ಬೈಕ್‌ಗಳು ಭಸ್ಮ! 
ಹುಬ್ಬಳ್ಳಿಯಲ್ಲಿ ತಪ್ಪಿದ ದೊಡ್ಡ ದುರಂತ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಒಂದೇ ಕುಟುಂಬಕ್ಕೆ ಸೇರಿದ ಸುಮಾರು ನಾಲ್ಕು ಬೈಕ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಮನೆಯೊಳಗೂ ಹೊಗೆ ಆವರಿಸಿ ಆತಂಕ ಸೃಷ್ಟಿಯಾಗಿತ್ತು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಕುಟುಂಬಸ್ಥರು ತಕ್ಷಣ ಬೆಂಕಿ ನಂದಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಪಟಾಕಿ ಸಿಡಿಸುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಸ್ಥಳಕ್ಕೆ ಡಿಸಿಪಿ ಶೃತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬೆಂಕಿಗೆ ಮೂಲ ಕಾರಣ ಏನು ಅನ್ನೋದು ತನಿಖೆನಂತರ ತಿಳಿಯಬೇಕಿದೆ , ಅಗ್ನಿಶಾಮಕ ಹಾಗೂ ಎಸ್‌ಒಸಿ ತಂಡದಿಂದಲೂ ಪರಿಶೀಲನೆ ನಡೆದಿದೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.