ಹಳೆ ಹುಬ್ಬಳ್ಳಿಯ ತಿಮ್ಮಸಾಗರ, ನೇಕಾರನಗರ ಹತ್ತಿರದ ಸರ್ವೆ ನಂಬರ್ 14/2 ರ ಜಮೀನಿನಲ್ಲಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದೆ.
ರಾತ್ರಿ ವೇಳೆ ಬೆಂಕಿ ಹೊತ್ತಿ ಉರಿದಿದ್ದು, ಸ್ಥಳೀಯರು ಬೆಂಕಿ ಆರಿಸಲು ಹರಸಾಹಸ ಪಟ್ಟಿದ್ದಾರೆ.
ದೀಪಾವಳಿಯ ವೇಳೆ ಸಾರ್ವಜನಿಕರು ಬೆಂಕಿ ಹಚ್ಚಿ ಆಕಾಶ ಬುಟ್ಟಿಯನ್ನು ಆಕಾಶದಲ್ಲಿ ಹಾರಲು ಬಿಡುತ್ತಾರೆ. ಆದ್ರೆ ಅದರಿಂದ ಅನಾಹುತ ಆಗುತ್ತಿವೆ. ಹೊಲದಲ್ಲಿ ಬಿದ್ದ ಆಕಾಶ ಬುಟ್ಟಿಯಿಂದಲೇ ಈ ಕಬ್ಬಿನ ಹೊಲಕ್ಕೆ ಬೆಂಕಿ ಬಿದ್ದಿದೆ ಎಂದು ಶಂಕಿಸಲಾಗಿದೆ.
ಇದೇ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಭೂಷಣ್ ಬೊರಸೆ ಅವರು ಮನವಿ ಮಾಡಿದ್ದಾರೆ - ನಾಗರಿಕರು ಸ್ಕೈ ಲ್ಯಾಂಟರ್ನ್ ಬಳಸಬೇಡಿ, ಇವು ಕೃಷಿ ಭೂಮಿಗಳಲ್ಲಿ ಹಾಗೂ ವಸತಿ ಪ್ರದೇಶಗಳಲ್ಲಿ ಬೆಂಕಿ ಅಪಾಯ ಉಂಟುಮಾಡುತ್ತಿವೆ.
ಹಬ್ಬ ಆಚರಿಸಿ, ಆದರೆ ಬೇರೆಯವರ ಬೆಳೆ, ಮನೆಗೆ ತೊಂದರೆ ಆಗದಂತೆ ನೋಡಿಕೊಳ್ಳಿ.