Home / ಕ್ರೈಂ / ಹುಬ್ಬಳ್ಳಿಯಲ್ಲಿ CCB ದಾಳಿ! 7 ಲಕ್ಷ ಮೌಲ್ಯದ 1...

ಹುಬ್ಬಳ್ಳಿಯಲ್ಲಿ CCB ದಾಳಿ! 7 ಲಕ್ಷ ಮೌಲ್ಯದ 13.5 ಕೆಜಿ ಗಾಂಜಾ ವಶ - ಪಾಂಡು, ಮುಜಾಫರ್ ಅರೆಸ್ಟ್!

E
By ETV 24X7 Chief Admin
November 6, 2026 358 views 0 comments Edit Article
ಹುಬ್ಬಳ್ಳಿಯಲ್ಲಿ CCB ದಾಳಿ! 7 ಲಕ್ಷ ಮೌಲ್ಯದ 13.5 ಕೆಜಿ ಗಾಂಜಾ ವಶ - ಪಾಂಡು, ಮುಜಾಫರ್ ಅರೆಸ್ಟ್!

ಡ್ರಗ್ಸ್ ದಂಧೆಕೋರರಿಗೆ ಸಿಸಿಬಿ ಪೊಲೀಸರು ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ನಿಂದ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆದಿದೆ.

ನಗರದ ಗಿರಿನಿಚಾಳ ಗ್ರೌಂಡ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ತಂಡ, ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ಬಂಧಿತರನ್ನು ಗಣೇಶಪೇಟೆ ನಿವಾಸಿ ಪಾಂಡು ರಾಯಬಾಗಿ ಮತ್ತು ಓಲ್ಡ್ ಹುಬ್ಬಳ್ಳಿ ನಿವಾಸಿ ಮುಜಾಫರ್ ಕಲೆಗಾರ ಎಂದು ಗುರುತಿಸಲಾಗಿದೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿಯಲ್ಲಿ CCB ದಾಳಿ! 7 ಲಕ್ಷ ಮೌಲ್ಯದ 13.5 ಕೆಜಿ ಗಾಂಜಾ ವಶ - ಪಾಂಡು, ಮುಜಾಫರ್ ಅರೆಸ್ಟ್!"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಬಂಧಿತರಿಂದ ಬರೋಬ್ಬರಿ 13.5 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿಯಾದ ಗಾಂಜಾದ ಮೌಲ್ಯ ಅಂದಾಜು 7 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಆರೋಪಿಗಳನ್ನು ಮುಂದಿನ ವಿಚಾರಣೆಗಾಗಿ ಉಪನಗರ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ, ಡಿಸಿಪಿಗಳಾದ ಶೃತಿ ಹಾಗೂ ರವೀಶ್ ಅವರ ಮಾರ್ಗದರ್ಶನದಲ್ಲಿ, ಸಿಸಿಬಿ ಎಸಿಪಿ ಶಿವಪ್ರಕಾಶ್ ನಾಯಕ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್ ಕಾಂಬಳೆ ಹಾಗೂ ಸಿಸಿಬಿ ಸಿಬ್ಬಂದಿಗಳು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಮಾದಕ ವಸ್ತುಗಳ ಜಾಲಕ್ಕೆ ಕಡಿವಾಣ ಹಾಕಲು, ಯುವಜನತೆಯ ಭವಿಷ್ಯ ರಕ್ಷಿಸುವ ನಿಟ್ಟಿನಲ್ಲಿ ಪೊಲೀಸರ ದಿಟ್ಟ ಹೆಜ್ಜೆಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.