ಹುಬ್ಬಳ್ಳಿಯಲ್ಲಿ ನಡೆದ ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಬಿಜೆಪಿ ಮುಖಂಡ ಅನೂಪ್ ಬಿಜವಾಡ ಹೇಳಿದ್ದಾರೆ.
ಆದರೆ ರೈತರ ಹೆಸರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಟಾರ್ಗೆಟ್ ಮಾಡಿ, ಏಕವಚನದಲ್ಲಿ ನಿಂದಿಸಿರುವ ಸ್ವಾಮೀಜಿಗಳ ನಡೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಶಶಿಕಾಂತ ಸ್ವಾಮೀಜಿ ಅವರು ರೈತರ ಹೋರಾಟದ ವೇದಿಕೆಯಲ್ಲಿ ಜೋಶಿ ಅವರನ್ನು ವೈಯಕ್ತಿಕವಾಗಿ ಟೀಕಿಸಿದ್ದು ಸರಿಯಲ್ಲ. ಇದು ರೈತರ ಹೋರಾಟವೋ ಅಥವಾ ಜೋಶಿ ವಿರುದ್ಧದ ಹೋರಾಟವೋ ಸ್ಪಷ್ಟಪಡಿಸಿಕೊಳ್ಳಬೇಕು ಎಂದು ಅನೂಪ್ ಬಿಜವಾಡ ಪ್ರಶ್ನಿಸಿದ್ದಾರೆ.
ದೇಶಕ್ಕೆ ಒಳ್ಳೆಯ ಕೆಲಸ ಮಾಡುತ್ತಿರುವ ಸಚಿವರಿಗೆ ಈ ರೀತಿ ಅವಮಾನ ಮಾಡಬಾರದು, ಸ್ವಾಮೀಜಿಗಳು ಕೂಡಲೇ ಜೋಶಿ ಅವರಿಗೆ ಕ್ಷಮೆ ಕೇಳಬೇಕು ಎಂದು ಅನೂಪ್ ಬಿಜವಾಡ ಈ ವಿಡಿಯೋ ಮೂಲಕ ಆಗ್ರಹಿಸಿದ್ದಾರೆ.