ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಖ್ಯಾತ ಡ್ರಮ್ಮರ್ ದೇವ ನಿಧನರಾಗಿದ್ದಾರೆ. ಬೆಂಗಳೂರಿನ ಆರ್ಆರ್ ನಗರದ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. RCB ಪಂದ್ಯಾವಳಿಯಲ್ಲಿ ಲೈವ್ ಡ್ರಮ್ ಬೀಟ್ ಮೂಲಕ ಮನೆಮಾತಾಗಿದ್ದರು.
ಕೆಲ ತಿಂಗಳ ಹಿಂದೆ ಗ್ಯಾಂಗ್ರೀನ್ನಿಂದ ಬಲಗಾಲು ತೆಗೆಯಲಾಗಿತ್ತು. ನಂತರ ಸ್ಟ್ರೋಕ್ ಹೊಡೆದಿದ್ದರಿಂದ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ತಮ್ಮ ಕೊನೆಯ ದಿನಗಳಲ್ಲಿಯೂ ಹಾಸಿಗೆಯಲ್ಲಿ ಮಲಗಿದ್ದರೂ ದಿಂಬಿಗೆ ಸ್ಟಿಕ್ನಿಂದ ಬಾರಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕೊನೆ ಗಳಿಗೆಯವರೆಗೂ ಡ್ರಮ್ ಮೇಲಿನ ವ್ಯಾಮೋಹ ಅವರಿಂದ ದೂರವಾಗಿರಲಿಲ್ಲ. ದೇವ ಅವರ ಅಗಲಿಕೆಗೆ ಚಿತ್ರರಂಗ ಮತ್ತು ಸಂಗೀತಲೋಕದಲ್ಲಿ ಸಂತಾಪ ವ್ಯಕ್ತವಾಗಿದೆ.