ಹುಬ್ಬಳ್ಳಿಯ ಯಲ್ಲಾಪುರ ಎಂ.ಡಿ ಕಾಲೇಜ್, ಬಾದಾಮಿ ಕ್ಲಿನಿಕ್ ಹತ್ತಿರ ಬೆಳಿಗ್ಗೆ 10:30 ರ ಸುಮಾರಿಗೆ ಯುವಕನ ಮೇಲೆ ಹಲ್ಲೆಗೆ ಯತ್ನ ನಡೆದಿದೆ.
ಸಂತ್ರಸ್ತ ತೋಹೀದ್ ಮಿರ್ಜಾ ಅವರ ಪ್ರಕಾರ, ಒಂದು ವರ್ಷದ ಹಿಂದೆ ನಡೆದ ಗಲಾಟೆಯ ಹಳೇ ದ್ವೇಷಕ್ಕೆ ಅಫ್ತಾಬ್ ಮತ್ತು ಆತನ ತಂಡ ಸೇಡು ತೀರಿಸಿಕೊಳ್ಳಲು ಬಂದಿತ್ತು.
ತೋಹೀದ್ ಮಿರ್ಜಾ ಕೆಲಸಕ್ಕೆ ಹೋಗಲು ಗಾಡಿ ತೆಗೆಯುತ್ತಿದ್ದಂತೆ, ಎದುರಿಗೆ ಆಟೋ ತಂದು ಅಡ್ಡ ಹಾಕಿ, ಸ್ಟಿಕ್ ಹಿಡಿದು ಹಲ್ಲೆ ನಡೆಸಿದ್ದಾರೆ. ಆಟೋದಲ್ಲಿ ಇಮ್ರಾನ್ ಕುಳಿತಿದ್ದ, ಇನ್ನೂ 4 ರಿಂದ 5 ಜನ ಎರಡು ಬೈಕ್ ಗಳಲ್ಲಿ ಬಂದಿದ್ದರು ಎಂದು ಆರೋಪಿಸಿದ್ದಾರೆ.
ಗಾಯಗೊಂಡ ತೋಹೀದ್ ಮಿರ್ಜಾನನ್ನು ಆತನ ಸ್ನೇಹಿತರು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಎಸ್.ಆರ್ ನಾಯ್ಕ್ ಅವರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.