ಹುಬ್ಬಳ್ಳಿಯ ಹೆಮ್ಮೆಯ ಚೆನ್ನಮ್ಮ ವೃತ್ತದಲ್ಲಿ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು.
ಚಿಕ್ಕ ಮಕ್ಕಳು, ಮಹಿಳೆಯರು ಕನ್ನಡ ಬಾವುಟ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರೆ, ಎಲ್ಲರ ಗಮನ ಸೆಳೆದಿದ್ದು 10 ವರ್ಷದಿಂದ ಬಸ್ ಚಾಲಕರಾಗಿ ದುಡಿಯುತ್ತಿರುವ ಓರ್ವ ಚಾಲಕನ ಕನ್ನಡ ಪ್ರೇಮ!
ತಮ್ಮ ಬಸ್ಸಿನ ಮುಂಭಾಗದಲ್ಲಿ ಕರ್ನಾಟಕ ಮಾತೆಯ ಸುಂದರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಹೂವು, ಹಾರ, ಬಾಳೆಹಣ್ಣಿನಿಂದ ಅಲಂಕರಿಸಿದ್ದಾರೆ. ಜೊತೆಗೆ ಬಸ್ನ ಇಕ್ಕೆಲಗಳಲ್ಲಿ KSRTC ಯ ಹಳೆಯ ಡಬಲ್ ಡೆಕ್ಕರ್ ಬಸ್ನಿಂದ ಹಿಡಿದು ಇಂದಿನ ಹೊಸ ಮಾದರಿಯ ಬಸ್ಗಳವರೆಗಿನ ಇತಿಹಾಸದ ಫೋಟೋಗಳನ್ನು ಹಾಕಿ, ಇಡೀ ಬಸ್ನ್ನೇ ಒಂದು ಚಲಿಸುವ ಮ್ಯೂಸಿಯಂ ಮಾಡಿದ್ದಾರೆ.
ಕನ್ನಡದ ಮೇಲಿನ ಈ ಅಭಿಮಾನಕ್ಕೆ ಹುಬ್ಬಳ್ಳಿ ಜನರು ಫಿದಾ ಆಗಿದ್ದಾರೆ.