Home / ಕ್ರೈಂ / ಹೋಟೆಲ್‌ನಲ್ಲಿ ತಡರಾತ್ರಿ ರಂಪಾಟ: ಕುಡಿದ ಮತ್ತಿ...

ಹೋಟೆಲ್‌ನಲ್ಲಿ ತಡರಾತ್ರಿ ರಂಪಾಟ: ಕುಡಿದ ಮತ್ತಿನಲ್ಲಿ ಯುವತಿಯಿಂದ ಹೈಡ್ರಾಮಾ, ಮಹಿಳಾ ಪೊಲೀಸ್ ಮೇಲೆ ಹ***ಲ್ಲೆ

E
By ETV 24X7 Chief Admin
October 1, 2026 421 views 0 comments Edit Article
ಹೋಟೆಲ್‌ನಲ್ಲಿ ತಡರಾತ್ರಿ ರಂಪಾಟ: ಕುಡಿದ ಮತ್ತಿನಲ್ಲಿ ಯುವತಿಯಿಂದ ಹೈಡ್ರಾಮಾ, ಮಹಿಳಾ ಪೊಲೀಸ್ ಮೇಲೆ ಹ***ಲ್ಲೆ

ಹುಬ್ಬಳ್ಳಿಯ ಶ್ರೀನಿಧಿ ಹೋಟೆಲ್‌ನಲ್ಲಿ ತಡರಾತ್ರಿ ಯುವಕ ಮತ್ತು ಯುವತಿ ನಡುವೆ ಜಗಳ ನಡೆದು ಭಾರೀ ಹೈಡ್ರಾಮಾ ಸೃಷ್ಟಿಯಾಗಿದೆ.

ಕುಡಿತದ ಅಮಲಿನಲ್ಲಿದ್ದ ಯುವತಿ ಸಾರ್ವಜನಿಕರಿಗೆ ಏಕವಚನದಲ್ಲಿ ಬೈದಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಜಗಳ ಬಿಡಿಸಲು ಬಂದವರ ಮೇಲೂ ಆಕೆ ಹಲ್ಲೆಗೆ ಮುಂದಾಗಿದ್ದಾಳೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹೋಟೆಲ್‌ನಲ್ಲಿ ತಡರಾತ್ರಿ ರಂಪಾಟ: ಕುಡಿದ ಮತ್ತಿನಲ್ಲಿ ಯುವತಿಯ ಹೈಡ್ರಾಮಾ, ಮಹಿಳಾ ಪೊಲೀಸ್ ಮೇಲೆ ಹ**ಲ್ಲೆ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಸ್ಥಳದಲ್ಲಿ ಪೊಲೀಸರಿದ್ದರೂ ತಕ್ಷಣ ಮಧ್ಯಪ್ರವೇಶಿಸಲಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದ್ದು, ಈ ನಿರ್ಲಕ್ಷ್ಯವೇ ನಂತರದ ಗಲಾಟೆಗೆ ಕಾರಣವಾಯಿತಾ ಎಂಬ ಪ್ರಶ್ನೆ ಮೂಡಿದೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಪರಿಸ್ಥಿತಿ ನಿಯಂತ್ರಿಸಲು ಬಂದ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೂ ಯುವತಿ ಹಲ್ಲೆ ನಡೆಸಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾನಗರ ಠಾಣೆ ಪೊಲೀಸರು ಇಬ್ಬರನ್ನು KIMS ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದು, ಅಲ್ಲಿಯೂ ಯುವತಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.