ಇಡಿ ದಾಳಿ ಸೆಪ್ಟೆಂಬರ್ 9 ರಂದು ಬೆಂಗಳೂರು, ಬೆಳಗಾವಿ, ಗೋಕಾಕ ಸೇರಿದಂತೆ 18 ಕಡೆ ದಾಳಿ ನಡೆದಿತ್ತು .ಜಪ್ತಿ ಸುಮಾರು ₹3.3 ಕೋಟಿ ಲೆಕ್ಕಕ್ಕೆ ಸಿಗದ ಭಾರತೀಯ ಕರೆನ್ಸಿ ಮತ್ತು ₹15 ಲಕ್ಷ ಮೌಲ್ಯದ ಡಾಲರ್/ಯೂರೋ ವಿದೇಶಿ ಕರೆನ್ಸಿ ಪತ್ತೆ ಎಂದು ಇಡಿ ವರದಿ
ವಿದೇಶಿ ಹೂಡಿಕೆ ಜಾರಕಿಹೊಳಿ ಕುಟುಂಬ ವಿದೇಶಿ ಕಂಪನಿಗಳಲ್ಲಿ ಬೃಹತ್ ಹೂಡಿಕೆ ಮಾಡಿದೆ. ಈ ಹಣ ಎಲ್ಲಿಂದ ಬಂತು? ಹವಾಲಾ / ಕಿಕ್ಬ್ಯಾಕ್ ಹಣವೇ? ತನಿಖೆಯಾಗಬೇಕು ಎಂದು ಆಗ್ರಹ ಮಾಡಿ ಕಾಂಗೋದ Eldorado Mining, ಜಾಂಬಿಯಾದ Nav Auram Mining, Magnitude Star SARL (ಚಿನ್ನದ ಗಣಿಗಾರಿಕೆ) ನಲ್ಲಿ 40% ಪಾಲುದಾರಿಕೆ ಸೇರಿದಂತೆ ದಾಖಲೆಗಳು ಸಿಕ್ಕಿವೆ ಎಂದು ಇಡಿ ಹೇಳಿದೆ ಅಂದರು
PWD ಟೆಂಡರ್ ಆರೋಪ ಸಂಬಂಧಿತ ಕಂಪನಿಯೊಂದರಲ್ಲಿ PWD ಸಚಿವರೇ ನಿರ್ದೇಶಕರಾಗಿದ್ದು, ಆ ಕಂಪನಿಗೆ ₹2,477 ಕೋಟಿ ಟೆಂಡರ್ ನೀಡಲಾಗಿದೆ. ಕಾನೂನು ಮೀರಿ ನೀಡಲಾಗಿದೆಯೇ ಎಂದು ತನಿಖೆಗೆ ಒತ್ತಾಯಿಸಿದ್ದಾರೆಇನ್ನು
ಬೆಲ್ಲದ ಅವರು ತನಿಖೆಯು ನಿಷ್ಪಕ್ಷಪಾತವಾಗಿ ನಡೆಯಲು ಸಚಿವರು ಹುದ್ದೆಯಲ್ಲಿ ಮುಂದುವರಿಯಬಾರದು. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಆರೋಪ ಸಾಬೀತಾಗದಿದ್ದರೆ ಮತ್ತೆ ಸಚಿವರಾಗಲಿ, ಸಾಬೀತಾದರೆ ಶಿಕ್ಷೆಯಾಗಲಿ.
ಇನ್ನು ಸಿಎಂ ಡಿಕೆ ಶಿವಕುಮಾರ್ ಅವರು ಇದನ್ನು ರಾಜಕೀಯ ಪ್ರೇರಿತ ದಾಳಿ ಬಿಜೆಪಿ ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಖಂಡಿಸಿದ್ದಾರೆ. ಸತೀಶ್ ಜಾರಕಿಹೊಳಿ ಪ್ರಾಮಾಣಿಕ ರಾಜಕಾರಣಿ ಎಂದು ಬೆಂಬಲಿಸಿದ್ದಾರೆ.