Home / ಬೆಳಗಾವಿ / ಚೆನ್ನಮ್ಮ ವೃತ್ತದಲ್ಲಿ ರೈತರ ಆಕ್ರೋಶ - ಕಲ್ಲು...

ಚೆನ್ನಮ್ಮ ವೃತ್ತದಲ್ಲಿ ರೈತರ ಆಕ್ರೋಶ - ಕಲ್ಲು ಹಿಡಿದು ವಾಹನ ತಡೆದ ಹೋರಾಟಗಾರರು, ಪೊಲೀಸರಿಗೂ ತರಾಟೆ

E
By ETV 24X7 Chief Admin
September 30, 2026 250 views 0 comments Edit Article
ಚೆನ್ನಮ್ಮ ವೃತ್ತದಲ್ಲಿ ರೈತರ ಆಕ್ರೋಶ - ಕಲ್ಲು ಹಿಡಿದು ವಾಹನ ತಡೆದ ಹೋರಾಟಗಾರರು, ಪೊಲೀಸರಿಗೂ ತರಾಟೆ

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಡೆದ ರೈತರ ಬೃಹತ್ ಹೋರಾಟದ ವೇಳೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಮಾವೇಶ ನಡೆಯುತ್ತಿದ್ದ ಸ್ಥಳಕ್ಕೆ ವಾಹನ ಸವಾರರು ಬಂದಾಗ ಆಕ್ರೋಶಗೊಂಡ ಹೋರಾಟಗಾರರು ಕಲ್ಲು ಹಿಡಿದು ವಾಹನಗಳನ್ನು ತಡೆದರು. ಇಲ್ಲಿ ಬರಬೇಡಿ ಎಂದು ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಚೆನ್ನಮ್ಮ ವೃತ್ತದಲ್ಲಿ ರೈತರ ಆಕ್ರೋಶ - ಕಲ್ಲು ಹಿಡಿದು ವಾಹನ ತಡೆದ ಹೋರಾಟಗಾರರು, ಪೊಲೀಸರಿಗೂ ತರಾಟೆ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಸ್ಥಳದಲ್ಲಿ ಬಂದೋಬಸ್ತ್ ಗೆ ನಿಯೋಜನೆಗೊಂಡಿದ್ದ ಪೊಲೀಸರ ವಿರುದ್ಧವೂ ರೈತರು ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆ ಈಡೇರುವವರೆಗೂ ರಸ್ತೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಫ್ಲೈಓವರ್ ಕೆಳಗೆ ಸಾವಿರಾರು ರೈತರು ಹಸಿರು ಶಾಲು ಧರಿಸಿ ಕುಳಿತಿದ್ದರಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರಮುಖ ರಸ್ತೆ ಬಹಳ ಹೊತ್ತು ಬಂದ್ ಆಗಿತ್ತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಟ್ಟರು.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.